Basic Information

ಡಾ. ರಾಮಕೃಷ್ಣ ಶಬರಾಯ ಎ, ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ ವಳಚ್ಚಿಲ್, ಮಂಗಳೂರು ಇದರಲ್ಲಿ ಪ್ರಾಂಶುಪಾಲರು ಹಾಗೂ ನಿರ್ದೇಶಕರಾಗಿರುವ ಡಾ.ರಾಮಕೃಷ್ಣ ಶಬರಾಯರು ಔಷಧೀಯ ವಿಜ್ಞಾನದಲ್ಲಿ ಬಿ.ಫಾರ್ಮ ಹಾಗೂ ಎಂ.ಫಾರ್ಮ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಬಳಿಕ AICTE, ನವದೆಹಲಿಯಿಂದ ಆಯ್ಕೆಗೊಂಡು ಊಟಿಯ ಜೆ.ಎಸ್.ಎಸ್ ಔಷಧೀಯ ಮಹಾವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ಕೈಗೊಂಡು, ತಬುಳುನಾಡಿನ ಡಾ.ಎಮ್.ಜಿ.ಆರ್ ಮೆಡಿಕಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದರು. ೧೯೯೭ರಿಂದ ೨೦೦೭ರ ತನಕ ನಿಟ್ಟೆ ಫಾರ್ಮಸಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೨೦೦೭-೨೦೦೮ ರಲ್ಲಿ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ೨೦೦೮ರಿಂದ ಶ್ರೀನಿವಾಸ್ ಫಾರ್ಮಸಿ ಕಾಲೇಜ್ನಲ್ಲಿ ಪ್ರಾಂಶುಪಾಲರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಿಕ್ಕಿಂ ಮಣಿಪಾಲ ಯುನಿವರ್ಸಿಟಿಯಿಂದ MBA ಡಿಗ್ರಿಯನ್ನು ಪಡೆದರು. ಆರಂಭದಿಂದಲೇ ಸಂಶೋಧನಾ ವಿಷಯದಲ್ಲಿ ಆಸಕ್ತಿ ಹೊಂದಿದ್ದ ಇವರು ೨೦೦೨ರಲ್ಲಿ ನೆದರ್ಲ್ಯಾಂಡ್ನ ಇಂಟರ್ನ್ಯಾಷನಲ್ ಫಾರ್ಮಸ್ಯುಟಿಕಲ್ ಪೆಡರೇಶನ್ನಿಂದ “Young Researcher” ಎಂದು ಗುರುತಿಸಲ್ಪಟ್ಟು ಫ್ರಾನ್ಸ್ನಲ್ಲಿ ನಡೆದ ಔಷಧೀಯ ವಿಶ್ವಸಮ್ಮೇಳನಲದಲಿ ಪ್ರಬಂಧ ಮಂಡಿಸಲು ಇಂಟರ್ ನ್ಯಾಷನಲ್ ಟ್ರಾವೆಲ್ ಸ್ಕಾಲರ್ಶಿಪ್ ಪಡೆದರು. ೨೦೦೩ರಲ್ಲಿ AICTE, New Delhi ಯಿಂದ ಇಂಟರ್ನ್ಯಾಷನಲ್ ಟ್ರಾವೆಲ್ ಗ್ರಾಂಟ್ ಪಡೆದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. ೨೦೦೯ರಲ್ಲಿ ಟರ್ಕಿಯ ಇಸ್ತಾನ್ಬುಲ್ನಲ್ಲಿ, ೨೦೧೧ರಲ್ಲಿ ಅಮೇರಿಕಾದ ನ್ಯೂ ಆರ್ಲಿಯನ್ಸ್ನಲ್ಲಿ, ೨೦೧೨ರಲ್ಲಿ ಮಲೇಶಿಯಾದ ಕೌಲಾಲಂಪುರದಲ್ಲಿ, ೨೦೧೩ರಲ್ಲಿ ಶ್ರೀಲಂಕಾದ ಕೊಲೊಂಬೋದಲ್ಲಿ, ೨೦೧೫ರಲ್ಲಿ ದುಬೈಯಲ್ಲಿ, ೨೦೧೮ರಲ್ಲಿ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ಅಂತರಾಷ್ಟ್ರೀಯ ಹಾಗೂ ಔಷಧೀಯ ವಿಶ್ವ ಸಮ್ಮೇಳನಗಳಲ್ಲಿ ಸಂಶೋಧನಾ ಪತ್ರಗಳನ್ನು ಮ೦ಡಿಸಿ ಭಾರತವನ್ನು ಪ್ರತಿನಿಧಿಸಿದರು. ಈಗಾಗಲೇ ೮ ಪಿ.ಎಚ್.ಡಿ ಪ್ರಾಜೆಕ್ಟ್, ೪೦ ಎಮ್.ಫಾರ್ಮ ಪ್ರಾಜೆಕ್ಟ್ ಹಾಗೂ ಇ0 ಫಾಮರ್ತು ಡಿ ಪ್ರಾಜೆಕ್ಟ್ಗಳನ್ನು ಮಾರ್ಗದರ್ಶನ ನೀಡಿರುತ್ತಾರೆ. ಇ00ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುತ್ತಾರೆ. ತನ್ನಸೇವೆಯುದ್ದಕ್ಕೂ FIP, ರಾಜೀವ್ ಗಾಂಧಿ ಔಷಧಿಯ ಮಹಾವಿದ್ಯಾಲಯ ಬೆಂಗಳೂರು, ಕರ್ನಾಟಕ ರಾಜ್ಯ ಫಾರ್ಮಸಿ ಪರಿಷತ್ತು, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯ ನವದೆಹಲಿ, ICMR ಅಖಿಲ ಭಾರತ ತಾಂತ್ರಿಕ ಶಿಕ್ಷಣ and Research Grant, Travel Grant, Seminar Grant & ផ십៨. ថថ ಸರಕಾರದ VGSTಯಿಂದ ನಲವತ್ತು ಲಕ್ಷ ರೂಪಾಯಿ (೪೦,೦೦೦,000)ಗಳ Research Grant ಪಡೆದು ಶ್ರೀನಿವಾಸ್ ಫಾರ್ಮಸಿ ಕಾಲೇಜ್ನಲ್ಲಿ ವಿಶೇಷ ಉಪಕರಣಗಳ ಸಂಶೋಧನಾ ಪ್ರಯೋಗಾಲಯವನ್ನು ನಿರ್ಬುಸಿದರು. ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ನ ದ.ಕ ಜಿಲ್ಲಾ ವಿಭಾಗ ಇದರ ಅಧ್ಯಕ್ಷರಾಗಿರುವ ಡಾ.ಶಬರಾಯರು ನಿರಂತರವಾಗಿ ವೃತ್ತಿಪರ ಚಟುವಟಿಕೆಗಳಾದ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಪೇಶಿಯಂಟ್ ಕೌನ್ಸೆಲಿಂಗ್, ಇಂಡಸ್ಟ್ರಿ ಆಕಾಡೆಬು ಇಂಟರಾಕ್ಷನ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ, ಸಹೊದ್ಯೋಗಿಗಳಿಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶಿಯಾದರು. ಕರ್ನಾಟಕ ರಾಜ್ಯದ IPA ಶಾಖೆಯಲ್ಲಿ E.C ಮೆಂಬರ್ ಆಗಿರುವ ಡಾ.ಶಬರಾಯರು ರಾಜೀವ್ ಗಾಂಧಿ ಔಷಧಿಯ ಮಹಾವಿದ್ಯಾಲಯದ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಪೂರೈಸಿದರು. ಇವರು ಯಕ್ಷಗಾನ ಕಲಾವಿದರು ಹಾಗೂ ಪೋಷಕರೂ ಹೌದು. ೨೦೧೬ರಲ್ಲಿ ಅಖಿಲ ಭಾರತ ಫಾರ್ಮಸಿ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ವಿಭಾಗವು ಡಾ.ಶಬರಾಯರ ವೃತ್ತಿಪರ ಕೊಡುಗೆ ಹಾಗೂ ಸಾಧನೆಗಳನ್ನು ಗುರುತಿಸಿ 'Principal of the year 2016' ಪ್ರಶಸ್ತಿ ನೀಡಿ ಗೌರವಿಸಿತು. ಇವರ ಸಂಶೋಧನಾ ಪತ್ರಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಎನ್ನುವ ಪ್ರಶಸ್ತಿಗಳನ್ನು ಹಾಗೂ ಪೇಟೆಂಟ್ ಪಡೆದರು. ಇವರ ಅಧ್ಯಕ್ಷತೆಯಲ್ಲಿ ಮುಂದುವರಿದ ದ.ಕ ಜಿಲ್ಲಾ IPA Local Branch a ធ្នូ 2໐໑໐d "Local branch of Excellence Award"( ס໙ផ링 ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಮುಂಬೈಯಿಂದ ಪಡೆದದ್ದು ಶ್ಲಾಘನೀಯ. ಆರೋಗ್ಯ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಜಾರಿಗೆ ತಂದಿರುವ ಬಬಧ ದಿನಗಳ ಆಚರಣೆ ಮತ್ತು ಮಹತ್ವವನ್ನು ತಿಳಿಯಪಡಿಸಲು ಈ “ಆರೋಗ್ಯ ಜಾಗೃತಿ ದಿನಗಳು-ಆಚರಣೆ ಮತ್ತು ಮಹತ್ವ" ಪುಸ್ತಕವನ್ನು ಸರಳ ಕನ್ನಡ ಭಾಷೆಯಲ್ಲಿ ವಿಶ್ಲೇಷಣಾತ್ಮಕವಾಗಿ ರಚಿಸಿದ್ದಾರೆ.

WhatsApp Button