Basic Information
ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು ಓದುಗರೆದೆಯಲ್ಲಿ ಹೊಸತನದ ಅಲೆಯನ್ನು ಎಬ್ಬಿಸುತ್ತವೆ. ಇವರು ರೂಪಿಸಿಕೊಳುವ ಆಡುಮಾತಿನ ಧಾರವಾಡ ಸೊಗಡಿನ ಭಾಷೆಯು ವಾವ್ ವಾವ್ ಎನ್ನಿಸುವಂತೆ ಆಹ್ಲಾದಕರವಾಗಿದೆ. ಸದಾ ಜೀವಪರವಾದ ಕಾಳಜಿ, ಪ್ರೀತಿ, ನೋವು, ಹತಾಶೆ ಎಲ್ಲವನ್ನೂ ಒಳಗೊಂಡ ಕುದರಿಯವರ ಶಾಯಿರಿಗಳಲ್ಲಿ ಕಾವ್ಯ ಪ್ರೀತಿ ಜಿನುಗುತ್ತಿದೆ. ಮೂಲತಃ ಧಾರವಾಡ ಜಿಲ್ಲೆಯವರಾದ ಕಾರಣ ಆ ನೆಲದ ಭಾಷಾ ಸೊಗಡು ಪ್ರತಿಯೊಂದು ಶಾಯರಿಯ ಜೀವ ಸತ್ವ ಎನ್ನಿಸಿದೆ. ಈ ಶಾಯಿರಿಗಳು ತರುಣ ತರುಣಿಯರೆದೆಯ ಭಾವನೆಯನ್ನು "ಪ್ರೀತಿ ಪ್ರೇಮ ಪ್ರಣಯ." ಶಾಯಿರಿಯ ಸಾಲುಗಳಲ್ಲಿ ಪ್ರೇಮದ ನಿನಾದ ಸದಾ ಗುನುಗುಡುತ್ತದೆ. ಇದರ ಅಂತರ್ಯದ ಆಳ, ಅಗಲ ಓದುಗರನ್ನು ಸೆಳೆಯುತ್ತಲೇ ಕುದರಿಯವರ ಕಾವ್ಯ ಕುಸುರಿ ಕೆಲಸಕ್ಕೆ ಬೆನ್ನು ತಟ್ಟುತ್ತವೆ. ಈ ಶಾಯಿರಿಗಳು ಹೊಸದಾಗಿ ಶಾಯಿರಿ ಬರೆಯುವವರಿಗೆ ಮಾರ್ಗದರ್ಶನವಾಗಬಲ್ಲವೆಂದರೆ ಅತಿಶಯೋಕ್ತಿ ಎನ್ನಿಸಲಾರದು. ಧಾರವಾಡ ಭಾಷೆಯ ಸೊಗಡು ಹೃದಯದ ಕದವನ್ನು ತೆರೆಸಬಲ್ಲದು! ಆ ಶಕ್ತಿಯನ್ನು ಶಾಯಿರಿಯ ಮೂಲಕ ತುಂಬಿ ಬರೆದಿರುವ ಕುದರಿಯವರ ಶ್ರಮವನ್ನು ಮೆಚ್ಚಲೇ ಬೇಕು.