Basic Information

ಚಿತ್ರದುರ್ಗ ತಾಲ್ಲೂಕು ಹೊಸಕಲ್ಲಹಳ್ಳಿ ಗ್ರಾಮದಲ್ಲಿ ಗೋನಾಳ್ ಈರಪ್ಪ, ಗುರುಶಾಂತಮ್ಮ ಇವರ ಪುತನಾಗಿ ಜನಿಸಿರುತ್ತಾರೆ. ಪಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಕಲಹಳ್ಳಿಯಲ್ಲಿ ಮುಗಿಸಿರುತ್ತಾರೆ. ಮತ್ತು ಪ್ರೌಢ ಶಿಕ್ಷಣವನ್ನು ಸರ್ಕಾರಿ ಪೌಢಶಾಲೆ (ಕೋಟೆ), ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಕಲಾ ಕಾಲೇಜು, ಪದವಿ ಶಿಕ್ಷಣವನ್ನು ಮಹರಾಜ ಮದಕರಿ ನಾಯಕ ಪಥಮ ದರ್ಜೆ ಕಾಲೇಜು, ಬಿ.ಇಡಿ. ಪದವಿಯನ್ನು ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾ ವಿದ್ಯಾಲಯ, ಚಿತ್ರದುರ್ಗ ಇಲ್ಲಿ ಮುಗಿಸಿರುತ್ತಾರೆ, ಎಂ.ಇಡಿ. ಪದವಿಯನ್ನು ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯ, ದಾವಣಗೆರೆ, ಕಾನೂನು ಪದವಿಯನ್ನು ಸರಸ್ವತಿ ಕಾನೂನು ಕಾಲೇಜು, ಚಿತ್ರದುರ್ಗ, ಎಂ.ಎ. ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ, ಶಿವಮೊಗ್ಗ, ಎಂ.ಫಿಲ್ ಪದವಿಯನ್ನು ಭಾರತೀಯ ವಿಶ್ವವಿದ್ಯಾನಿಲಯ, ಕೊಯಮತ್ತೂರು, ಪಿಹೆಚ್.ಡಿ ಪದವಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ಇಲ್ಲಿ ಮುಗಿಸಿರುತ್ತಾರೆ. ಇವರು 1998 ಇಸವಿಯಿಂದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕದ ಹಲವಾರು ಶಿಕ್ಷಣ ಮಹಾವಿದ್ಯಾಲಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ, ಮಾರ್ಗದರ್ಶಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಹಾಗೂ ವಿಚಾರ ಸಂಕೀರ್ಣಗಳು, ರಾಜ್ಯ ಮಟ್ಟದ ಕಾರ್ಯಗಾರಗಳು, ವಿಶ್ವವಿದ್ಯಾನಿಲಯದ ಕಾರ್ಯಗಾರಗಳಲ್ಲಿ ಭಾಗವಹಿಸಿರುತ್ತಾರೆ. ಇವರು ಪ್ರಸ್ತುತ ಸಂದರ್ಭದಲ್ಲಿ ಅವರ ಸಂಶೋಧನಾ ಮಹಾ ಪಬಂಧವನ್ನು ಪುಸ್ತಕ ರೂಪದಲ್ಲಿ ತರುತಿರುವುದು ಅನೇಕ ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಇವರಿಂದ ಶಿಕ್ಷಣ ಕೇತಕ್ಕೆ ಇನ್ನು ಹೆಚ್ಚಿನ ಕೃತಿಗಳು ಮೂಡಿ ಬರಲೆಂದು ಶುಭ ಹಾರೈಸುತ್ತೇನೆ.

WhatsApp Button