Basic Information
ಕನ್ನಡ ಸಾಹಿತ್ಯ ಲೋಕದಲ್ಲಿ ಅಕ್ಕಮಹಾದೇವಿ ಮೊದಲ ಕವಡುತ್ರಿ ಎಂದು ಹೇಳಲಾಗುತ್ತಿದ್ದರೂ. ಇದಕ್ಕೂ ಮುನ್ನವೇ ಶರೆಮರೆಯಲ್ಲಿ ಅನೇಕರು ತಮ್ಮ ಮನಸ್ಸಿನ ಪುಡಿತಕ್ಕೆ ಕಾವ್ಯ ರೂಪ ನೀಡಿ ಭಾವನೆಯನ್ನು ಅಕ್ಷರ ರೂಪದಲ್ಲಿ ಅಥವಾ ಬಾಯಿಂದ ಬಾಯಿಗೆ ದಾಡುವ ಜಾನಪದ ರೂಪದಲ್ಲಿ ದಾಖಲಿಸಿದ್ದಾರೆ. ನವ್ಯ ಮತ್ತು ನವೋದಯ ಕಾಲದಲ್ಲಿ ಕೂಡ ಅನೇಕ ಮಹಿಳಾ ಸಾಹಿತಿಗಳು ಮುನ್ನಲೆಗೆ ಬಂದು ಸಾಹಿತ್ಯ ಸೇವೆಯಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ ಮಾತ್ರವಲ್ಲ. ಮುಂಚೂಣಿಯಲ್ಲಿ ನಿಂತು ಕನ್ನಡ ಸಾರಸ್ವತ ಲೋಕದ ಅಧಿಕೃತ ಪ್ರತಿನಿಧಿ ಎಂದು ಕೂಡ ಅನಿಸಿಕೊಂಡಿದ್ದಾರೆ. ಇಂತವರ ಪಾಲಿಗೆ ಇತ್ತೀಚಿನ ದಶಕಗಳಲ್ಲಿ ಅನೇಕರು ಬಂದಿದ್ದಾರೆ. ಇವರ ನಾಲಿನಲ್ಲಿ ಮಲೆನಾಡಿನ ಪ್ರಕೃತಿಯ ಮಡಿಲಿನಲ್ಲಿ ಸದ್ದಿಲ್ಲದೆ ಸಾಹಿತ್ಯ ಸೇವೆ ಮಾಡುತ್ತಿರುವ ಗೀತಾ ಮಕ್ಸಿಮನೆ ಕೂಡ ಒಬ್ಬರು. ವರ್ತಮಾನದ ಮತ್ತು ಆಯಾ ಕಾಲಘಟ್ಟದ ಘಟನೆಗಳಿಗೆ ಪ್ರತಿಕ್ರಿಯೆಯನ್ನು ತಮ್ಮ ಕಾವ್ಯ ಮತ್ತು ಲೇಖನದ ಮೂಲಕ ನೀಡುತ್ತಿದ್ದಾರೆ. ಇವರ ಅನೇಕ ಲೇಖನ ಮತ್ತು ಕವನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಇದರ ಜೊತೆಗೆ ಇತಿಹಾಸ ಮತ್ತು ಪುರಾಣವನ್ನು ಕೂಡ ಆಸಕ್ತಿಯಿಂದ ಅಭ್ಯಾಸ ಮಾಡಿ ಈ ವಿಷಯದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಸಾಹಿತ್ಯ ಸೇವೆಯನ್ನು ಅಕ್ಷರ ರೂಪದ ಮೂಲಕ ಮಾಡಬೇಕಾದರೆ ಸಾಹಿತ್ಯದ ಅಧ್ಯಯನ ಮುಖ್ಯ ಎಂಬುದಕ್ಕೆ ಇವರು ಉದಾಹರಣೆಯಾಗಿ ನಿಂತಿದ್ದಾರೆ. ನಿರಂತರ ಅಧ್ಯಯನವೇ ಇವರ ಸಾಹಿತ್ಯದ ಕಸುವಿನ ಸೆಲೆ. ಬಾವ ಅಂಬ ಹೆಸರಿನ ತಮ್ಮ ಚೊಚ್ಚಲ ಕವನ ಸಂಕಲದ ಮೂಲಕ ಸಾಹಿತ್ಯ ಲೋಕದಲ್ಲಿ ಹೆಜ್ಜೆಯಿಟ್ಟಿರುವ ಇವರು ಈ ಕವನ ಸಂಕಲದಲ್ಲಿ ತಮ್ಮ ಕವಿಶ್ವದ ಸಾಮರ್ಥ್ಯವನ್ನು ಸಾಹಾತುಪಡಿಸಿದ್ದಾರೆ. ವರ್ತಮಾನದ ಕ್ರಿಯೆಗಳಿಗೆ ತಮ್ಮ ಭಾವನೆಯನ್ನು ಅಕ್ಷರದ ಮೂಲಕ ಅರ್ಥ ಪೂರ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಸೂಕ್ಷ್ಮ ಮನಸ್ಸು, ಹದವಾದ ಪ್ರತಿಕ್ರಿಯೆ, ಎಲ್ಲದಕ್ಕೂ ಸ್ಪಂದಿಸುವ ಗುಣ ಈ ಕವನ ಸಂಕಲನದಲ್ಲಿ ಎದ್ದು ಕಾಣುತ್ತದೆ. ಮೊದಲ ಕವನ ಸಂಕಲದಲ್ಲಿಯೇ ಭರವಸೆಯನ್ನು ಮೂಡಿಸಿದ್ದಾರೆ. ಬೆರಗು ಹುಟ್ಟಿಸುವ ಕವನಗಳನ್ನು ಅಕ್ಷರಗಳ ಮೂಲಕ ಪೋಣಿಸಿದ್ದಾರೆ. ಮಲೆನಾಡಿನ ಮನಸ್ಸು ಕಾವ್ಯ ಲೋಕದಲ್ಲಿ ತೆರೆದಿಟ್ಟಿದ್ದಾರೆ.