book

ನನ್ನ ಬಾಲ್ಯ (ಬಾಲ್ಯ ಕಾಲದ ನೆನಪುಗಳು) ಭಾಗ-1

  • TypePrint
  • CategoryNon-Academic
  • Sub CategoryNon Fiction
  • StreamMemoir-Non Fiction

ಈ ಪುಸ್ತಕ ಮಲೆನಾಡಿಗರ ಮನೆಗಳಲ್ಲಿ ಇರಲೇ ಬೇಕಾದ್ದು.

ಕಳೆದ ವರ್ಷ ಅಂದರೆ 17 ಏಪ್ರಿಲ್ 2022 ರಲ್ಲಿ ಅಕಸ್ಮಿಕವಾಗಿ ಎ ವಿ ಕೆ ಮೂರ್ತಿ ಎನ್ನುವವರ ಪೇಸ್ ಬುಕ್ ಲೇಖನ "ಕೊಪ್ಪ ಸಂತೆ ಬೇಟಿ" ಓದಿದೆ. ಇದು ನಮ್ಮ ಶಿವಮೊಗ್ಗ ಜಿಲ್ಲೆಯ ಬಗಲಿನ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರ, 1960 ರ ದಶಕದ ಅಲ್ಲಿನ ಚಿತ್ರಣವನ್ನು ಎ.ವಿ.ಕೃಷ್ಣಮೂರ್ತಿ ಎಷ್ಟು ಸುಂದರವಾಗಿ ಸರಳವಾಗಿ ವಿವರಿಸಿದ್ದಾರೆನ್ನುವುದು ಅವರ ಆತ್ಮಚರಿತ್ರೆ ಆದ ಈ ಪುಸ್ತಕದಲ್ಲಿ ನೋಡಬಹುದು.

ಈ ಲೇಖನವನ್ನು ನನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಗೆಳೆಯರಿಗೆಲ್ಲ ಲಿಂಕ್ ಕಳಿಸಿದ್ದೆ, ಎಲ್ಲರೂ ನಂತರದ ದಿನಗಳಲ್ಲಿ ಇವರ ಲೇಖನಗಳಿಗೆ ಅಭಿಮಾನಿಗಳಾಗಿದ್ದಾರೆ.

ಇವರ ಆತ್ಮಚರಿತ್ರೆ ಇಂಗ್ಲೀಷ್ ನಲ್ಲಿ ಬರೆದ ನೂರಕ್ಕೂ ಹೆಚ್ಚು ಅಧ್ಯಾಯಗಳನ್ನು ಇವರು ಇವರ ಸಹೋದರಿಯರಿಗಾಗಿ ಕನ್ನಡದಲ್ಲಿ ಅನುವಾದಿಸಿರುವುದೇ ಈ ಪುಸ್ತಕ.   ಇದರಲ್ಲಿ ಇವರ “ಬಾಲ್ಯದ ನೆನಪುಗಳು” ಮಲೆನಾಡಿನ ಅಂದಿನ ಪರಿಸರ, ಕಾಲಮಾನಗಳ ಜೊತೆ ಪೋಣಿಸಿದ ಸುಂದರವಾದ ಹೂ ಮಾಲೆಯಂತೆ ಇದೆ.

1954 ರಲ್ಲಿ ತುಂಗಾ ನದಿಯಲ್ಲಿ ದೇಹ ಪರಿತ್ಯಾಗ ಮಾಡಿದ ಶೃಂಗೇರಿ ಜಗದ್ಗುರುಗಳ ಆ ಘಟನೆ, 1965 ರಲ್ಲಿ ಅವರ ಸ್ಮರಣಾರ್ಥ ಶೃಂಗೇರಿಯಲ್ಲಿ ಪ್ರಾರಂಭವಾದ ಕಾಲೇಜು ಉದ್ಘಾಟನೆ ಮಾಡಿದವರು ಮಣಿಪಾಲಿನ ಡಾ.ಟಿ.ಎಂ.ಎ.ಪೈ. ಆ ಕಾರ್ಯಕ್ರಮದ ಅಧ್ಯಕ್ಷತೆ ಅಂದಿನ ಚಿಕ್ಕಮಗಳೂರು ಜಿಲ್ಲಾದಿಕಾರಿ H. L. ನಾಗೇಗೌಡರು (ಜನಪದ ಲೋಕ) ವಹಿಸಿದ್ದರಂತೆ.

ಆಡಳಿತ ಮಂಡಳಿ ಒತ್ತಾಯದಿಂದ ಶಿವಮೊಗ್ಗದ ಶಾಲೆ ತೊರೆದು ಈ ಕಾಲೇಜಿನ ಮೊದಲ ವಿದ್ಯಾರ್ಥಿ ಆದ  ಎ ವಿ ಕೃಷ್ಣಮೂರ್ತಿ ಅದೇ ವರ್ಷ ಮೈಸೂರು ವಿಶ್ವವಿದ್ಯಾಲಯದಲ್ಲಿ 4 ನೇ Rank ತಂದು ಕಾಲೇಜಿನ ಇತಿಹಾಸದಲ್ಲಿ ದಾಖಲೆ ಮಾಡುತ್ತಾರೆ. ಮುಂದೆ ಫೈನಲ್ ಬಿಎಸ್ಸಿಯಲ್ಲಿ ಕೂಡ ಇವರಿಗೆ 10 ನೇ Rank ಬರುತ್ತದೆ, 
ನಂತರ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಖನಿಜ ಶಾಸ್ತ್ರದಲ್ಲಿ (Metallurgy) ಇಂಜಿನಿಯರಿಂಗ್ ಕಲಿಯಲು ಸೇರುತ್ತಾರೆ. ಆದರೆ ಕೆಲವೇ ತಿಂಗಳ ನಂತರ ಬೆಂಗಳೂರಿನ ಸುಭಾಷ್ ನಗರ ಬಸ್ ನಿಲ್ದಾಣದಿಂದ ಶೃಂಗೇರಿಗೆ ಇವರಣ್ಣ ಪುಟ್ಟಣ್ಣನ ಜೊತೆ ವಾಪಾಸ್ ಬರುತ್ತಾರೆ೦ದರೆ ಬಡವರಿಗೆ ಅಹ೯ತೆ ಇದ್ದರೂ ಹಣ ಹೊಂದಿಸಲಾಗದೆ ಅನರ್ಹರಾಗುವ ಅವರ ಜೀವನದ ಕಥೆ ಒಂದು ದುರಂತವೇ ಆಗಿದೆ.

ನಿಜಕ್ಕೂ ನನಗೆ ಇವರ ಲೇಖನಗಳು ರಸವತ್ತಾಗಿ ಮುಂದಿನ ಅಧ್ಯಾಯಕ್ಕಾಗಿ ಕಾಯುತ್ತಿದ್ದೆ, ಕೆಲವು ಅವರ ಜೀವನದ ಕಷ್ಟಗಳು ನನ್ನ ದುಃಖ ಉಮ್ಮಳಿಸುತ್ತಿತ್ತು.
ಇಂಜಿನಿಯರ್ ಆಗಿ ದೊಡ್ಡ ವಿಜ್ಞಾನಿಯೇ ಆಗಬಹುದಿದ್ದ ಪ್ರತಿಭಾವಂತ ಎ.ವಿ.ಕೃಷ್ಣಮೂರ್ತಿ ಬ್ಯಾಂಕ್ ಆಡಿಟರ್ ಆಗಿ ಸೀನಿಯರ್ ಮ್ಯಾನೇಜರ್ ಆಗಿ ಸ್ವಯಂ ನಿವೃತ್ತರಾಗಿದ್ದಾರೆ. ಇವರ ಹುರಳಿ ಹಕ್ಕಲಿನ ಗತ ವೈಭವ, ಬ್ಯಾಂಕಿನ ದಿನಗಳು ಮುಂದಿನ ದಿನಗಳಲ್ಲಿ ಕನ್ನಡ ಓದುಗರಿಗೆ ಪುಸ್ತಕವಾಗಿ ಸಿಗಲಿ ಎಂದು ಹಾರೈಸುತ್ತೇನೆ.

1960-70 ರ ದಶಕದ ಶಿವಮೊಗ್ಗ, ಅವತ್ತಿನ ಶಿವಮೊಗ್ಗದ ಮೀನಾಕ್ಷಿ ಭವನ, ಗಾರ್ಡನ್ ಏರಿಯಾ,ನೆಹರೂ ರಸ್ತೆ, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ನ್ಯಾಷನಲ್ ವಿದ್ಯಾ ಸಂಸ್ಥೆ, ಸಹ್ಯಾದ್ರಿ ಕಾಲೇಜು, ಅಂದಿನ ಖ್ಯಾತ ಸಾರಿಗೆ ಬಸ್ಸುಗಳಾದ CKMS ಮತ್ತು ಶಂಕರ್ ಕಂಪನಿ, ಅಡಿಕೆ - ಭತ್ತ- ವೀಳ್ಯದೆಲೆ ಕೃಷಿ ಮತ್ತು ಅದರ ಮಾರಾಟ, ಆಗಷ್ಟೇ ಬಳಕೆ ಪ್ರಾರಂಭವಾದ ಗ್ರಾಮಾಫೋನು, ಅಲಾರಂ, ರೆಡಿಯೋ ಇತ್ಯಾದಿಗಳಿಂದ ನಮ್ಮನ್ನೆಲ್ಲಾ ಹಿಂದಿನ ಶತಮಾನಕ್ಕೆ ಕರೆದೊಯ್ಯುವ ಈ ಶಕ್ತಿಶಾಲಿ ಲೇಖಕ ಎ.ವಿ.ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಾಹಿತಿಗಳಾಗಿದ್ದಾರೆ.


 

Buy From
IIP Store ₹ 332
Amazon ₹ 415
Flipkart ₹ 415

**Note: IIP Store is the best place to buy books published by Iterative International Publishers. Price at IIP Store is always less than Amazon, Amazon Kindle, and Flipkart.

Book Title ನನ್ನ ಬಾಲ್ಯ (ಬಾಲ್ಯ ಕಾಲದ ನೆನಪುಗಳು) ಭಾಗ-1
Author(s) A. V. Krishnamurthy
ISBN 978-93-5747-195-4
Book Language KANNADA
Published Date JULY, 2023
Total Pages 242
Book Size 7x10 Standard
Paper Quality 75 GSM
Book Edition FIRST EDITION

COMMENTS

    No comments found for book with Book title. ನನ್ನ ಬಾಲ್ಯ (ಬಾಲ್ಯ ಕಾಲದ ನೆನಪುಗಳು) ಭಾಗ-1

LEAVE A Comment

Related Books

ನನ್ನ ಬಾಲ್ಯ (ಬಾಲ್ಯ ಕಾಲದ ನೆನಪುಗಳು) ಭಾಗ-1
ನನ್ನ ..
  • IIP1099,
  • Print
₹ 332 ₹ 415
Add to cart
ನನ್ನ ಬಾಲ್ಯ (ಬಾಲ್ಯ ಕಾಲದ ನೆನಪುಗಳು) ಭಾಗ-2
ನನ್ನ ..
  • IIP1100,
  • Print
₹ 368 ₹ 460
Add to cart
FOREVER
FOREVER..
  • IIP1858,
  • Print
₹ 280 ₹ 350
Add to cart
WhatsApp Button